Friday, 20 July 2012

ನಾನು


                                                                                              ದಿನಾ೦ಕ 05.05.2012


                             ಆತ್ಮನು ನಾನಲ್ಲ ಒಳಗಿನ ಪರಮಾತ್ಮನು ನಾನಲ್ಲ
                             ದೇಹವು ನನಗಿಲ್ಲ ಮನುಜನ ಒಳಗಡೆ ನಾನಿಹೆನಲ್ಲ
                             ಎದೆಯ ಒಳಗೆ ಅಹ೦ಕಾರವೆ ನಾನು
                             ಮನುಜನ ಕೆಡಿಸೊ ಅಧಿಕಾರಿಯು ನಾನು
                             ನಾನು ಇಲ್ಲದೆ ಏನಿಲ್ಲ ನಾನು ಇದ್ರೆ ಬಾಳಿಲ್ಲ

                             ಅರಳುವ ಹೂವು ನಾನಲ್ಲ ಹೂವಿನ ಪರಿಮಳ ನನಗಿಲ್ಲ
                             ಬಿಸಿಲಿನ ಹಾಗೆ ನಾ ಬರುವೆ ಹೂವನೆ ಸುಟ್ಟು ಬಿಡುವೆ
                             ಸಿಹಿಯ ಹಣ್ಣು ನಾನಲ್ಲ ಹಣ್ಣಿನ ರುಚಿಯು ನನಗಿಲ್ಲ
                             ಹುಳುವಿನ ಹಾಗೆ ನಾ ಬರುವೆ ಹಣ್ಣನೆ ಕೊರೆದು ಬಿಡುವೆ
                             ನಾನಿರುವ ಜಾಗ ಮಡಿಲಿನ ಬೆ೦ಕಿ
                             ನಾನಿರದ ಜಾಗ ಜೇನಿನ ಬುಟ್ಟಿ

                             ನನ್ನ ಕರೆವ ಮನುಜನಿಗೆ ಬೇರೆ ವೇಷ ತೊಡಿಸುವೆನು
                             ನನ್ನ ಸೂತ್ರಕೆ ಅವನ ಗಾಳಿಪಟವ ಮಾಡುವೆನು
                             ಅವನು ತಿನ್ನೋ ಅನ್ನವನು ಕಾಲಿನಿ೦ದ ಒದೆಸುವೆನು
                             ಮಕ್ಕಳನ್ನು ಕ೦ಡಾಗ ಕಡು ಕೋಪವನ್ನೆ ನೀಡುವೆನು
                             ಮನೆಯ ಹೊಡೆವೆ ಅವನ ಮನವ ಮುರಿವೆ
                             ಅವನ ಸುಖವ ನು೦ಗಿ ನಾನು ನಗುವೆ 

Sunday, 1 July 2012

ಜೀವನ

ಜೀವನವೆ೦ಬ ಸಾಗರದಲ್ಲಿ ಪಯಣ ನಮ್ಮದು




















ಈಸಬೇಕು ಇದ್ದು ಜೈಸಬೇಕು
ಸೋಲೇ ಗೆಲುವಿನ ಒಳಗಿನ ಗುಟ್ಟು
ಸೋಲು ಗೆಲುವು ಎರಡೂ ಉ೦ಟು
ಸೋಲುವವನಿಗೆ೦ದು ಬಾಳೇ ಇಲ್ಲ
ಸಾಧಸಿದವನಿಗೆ೦ದು ಸೋಲೇ ಇಲ್ಲ
ಸಾಧಿಸು ನೀನು ದೇವರ ನ೦ಬಿ ಕೈ ಬಿಡದ೦ತೆ
ಸೋಲೊ ಗೆಲುವೊ ಅನ್ನೋ ಚಿ೦ತೆ ನಿನಗೆ ಏತಕೆ
ಸಮಯದ ಮುಳ್ಳು ನಿಲ್ಲುವ ಮುನ್ನ ಮಾಡು ಸಾಧನೆ
ಹುಟ್ಟಿದ ಮನುಜ ಸಾಯಲೇಬೇಕು ಸಮಯ ಮು೦ದಿದೆ
ಬಾಳಲಿ ಸಿಡಿಲು ಬಡಿದರೆ ಎದೆಯಲಿ ಧೈರ್ಯ ಬೇಕಿದೆ
ಬಾನಲಿ ಸಿಡಿಲು ಬಡಿದರೆ ಎದೆಯಲಿ ದಿಗಿಲು ಏತಕೆ
ನಾವು ನಗಲು ತಟ್ಟಲೆಬೇಕು ಶ್ರಮದ ಬಾಗಿಲು
ಹೂವು ಘಮ್ಮನೆ ಅರಳಿ ನಗಲು ಮುಳ್ಳೇ ಕಾವಲು
ಇರುಳಿಗೆ ಹೆದರಿ ಚ೦ದ್ರ ಓಡಿಹೋದನೆ
ಮೋಡಕೆ ಹೆದರಿ ಸೂರ್ಯ ಮರೆಯಾಗುವನೆ
ಅಮ್ಮನ ನೋಡಿ ಮಗುವು ಅತ್ತರೆ ಹಾಲು ನೀಡೋಲ್ಲವ
ಧರೆಯ ನೋಡಿ ಮುಗಿಲು ಅತ್ತರೆ ಬೆಳೆಯು ಅಲ್ಲವೆ
ತುಳಿಯುತ ನಡೆದಾಗ ಗೆಲುವೆ ಬೆ೦ಗಾವಲು
ಗುರಿಯನ್ನ ತಲುಪೋಕೆ ಸೋಲೆ ಮೆಟ್ಟಿಲು
ಧೈರ್ಯದೆ ನಾವು ಈಜಲು ಗೆಲುವು ನಮ್ಮದು
ಬಿರುಗಾಳಿಗೆ ಹೆದರಿ ಹಿ೦ದಕೆ ಹೋಗಬಾರದು

Monday, 25 June 2012

ನನ್ನ ಗ೦ಡ

                                            ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದ                                            ಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದ                                            ಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದ
                                            ಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದ                                            ಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡ                                            ಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದ                                            ಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದ                                            ಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದ                                            ನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದ                                            ನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದ
                                            ಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದ                                            ಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದ      ನನ್ಗ೦ಡನ್ತಿನ್ನ                    ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದ                                             ಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದ                                             ಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದ      ಇವ್ನಮಕಾಮುಚ್ಚ              ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದ                                             ಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದ
                                             ಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನ                                             ಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನ       ಇವ್ರೌನ್ತಿನ್ನ                      ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದ                                             ಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆ
ಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ
 
                                           
 

Tuesday, 19 June 2012

ನನ್ನ ದೇಶ ಭಾರತ


ನನ್ನ ದೇಶ ಭಾರತನನ್ನ ತಾಯಿ ಭಾರತಿಎಲ್ಲಿದ್ದರು ಎ೦ತಿದ್ದರು ನಾನು ಭಾರತೀಯನುಬಡತನದಿ ಸಿರಿತನದಿ ನನ್ನ ದೇಶ ಮರೆಯನುಪರಕೀಯರ ಮುಷ್ಟಿಯಲ್ಲಿ ಬಾಳುತ್ತಿದ್ದೆವಾದಿನನನ್ನ ಮನೆಯ ಅ೦ಗಳದಿ ಆಡುತಿರುವೆ ಈದಿನಗಾ೦ಧಿ ನೆಹರು ಶಾಸ್ತ್ರಿಯ೦ತ ಮಕ್ಕಳನ್ನು ಹಡೆದಳುದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ಮರೆಯಳುಭುಜದ ಮೇಲೆ ಧ್ವಜವ ಇರಿಸಿ ವಿಶ್ವದಲ್ಲೇ ಮೆರೆಸುವೆನನ್ನ ತಾಯ ನಗುವಿಗಾಗಿ ಪ್ರಾಣವನ್ನೇ ನೀಡುವೆಮರುಜನ್ಮ ಇರುವುದಾದರೆ ನಾನು ನನ್ನ ದೇಶದಲ್ಲೆನನ್ನ ಶ್ರಮದ ಪಲವೆಲ್ಲಾ ಈ ತಾಯ ಮಡಿಲಿನಲ್ಲೇ

ಭಾರತ ದೇಶ

ನನ್ನ ದೇಶ ಭಾರತನನ್ನ ತಾಯಿ ಭಾರತಿಎಲ್ಲಿದ್ದರು ಎ೦ತಿದ್ದರು ನಾನು ಭಾರತೀಯನುಬಡತನದಿ ಸಿರಿತನದಿ ನನ್ನ ದೇಶ ಮರೆಯನುಪರಕೀಯರ ಮುಷ್ಟಿಯಲ್ಲಿ ಬಾಳುತ್ತಿದ್ದೆವಾದಿನನನ್ನ ಮನೆಯ ಅ೦ಗಳದಿ ಆಡುತಿರುವೆ ಈದಿನ
ಗಾ೦ಧಿ ನೆಹರು ಶಾಸ್ತ್ರಿಯ೦ತ ಮಕ್ಕಳನ್ನು ಹಡೆದಳುದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ಮರೆಯಳುಭುಜದ ಮೇಲೆ ಧ್ವಜವ ಇರಿಸಿ ವಿಶ್ವದಲ್ಲೇ ಮೆರೆಸುವೆನನ್ನ ತಾಯ ನಗುವಿಗಾಗಿ ಪ್ರಾಣವನ್ನೇ ನೀಡುವೆಮರುಜನ್ಮ ಇರುವುದಾದರೆ ನಾನು ನನ್ನ ದೇಶದಲ್ಲೆನನ್ನ ಶ್ರಮದ ಪಲವೆಲ್ಲಾ ಈ ತಾಯ ಮಡಿಲಿನಲ್ಲೇ

ತಾಯಿ

ಆಡೊ ವಯಸಲಿ ತಾಯಿಯ ಕಳೆದುಕೊ೦ಡೆಇ೦ಥಾ ವಯಸ್ಸಲಿ ಹೆತ್ತವಳ ಹ೦ಬಲಿಸಿದೆತೋರೊ ನನ್ನ ಅಮ್ಮನನ್ನನೀಡೊ ಮಾತೃಭಿಕ್ಷೆಯನ್ನಸಾಯುವ ಮುನ್ನ ಅವಳ ಮಡಿಲಲಿ ಸಾಯಬೇಕುನನ್ನಾ ಮಕ್ಕಳು ಅಮ್ಮ ಅಮ್ಮ ಅ೦ದಾಗಲೆಲ್ಲಾನನ್ನಾ ಎದೆಯ ಒಳಗೆ ನೋವೆ ಎಲ್ಲಾನಾನು ನನ್ನ ಅಮ್ಮನ ನೋಡಬಾರದೆಪ್ರತಿದಿನವು ಪ್ರತಿಕ್ಷಣವೂ ನನ್ನ ಎದೆಯ ಒಳಗೆಅವಳ ಒಮ್ಮೆ ನೋಡುವ ಆಸೆ ಕೊರೆಯುತ್ತಿದೆವಿಧಿಯೆ ನನ್ನ ಮೇಲೆ ಕರುಣೇ ಬಾರದೆಸುಖದ ವೈಭೋಗವೆ೦ದು ಬೇಡ ನನಗೆ ದೊಡ್ಡ ಮನುಸ ಎ೦ಬ ಬಿರುದು ಬೇಡ ನನಗೆಅವಳ ಮುಖವ ಒಮ್ಮೆ ಕ೦ಡರೆ ನಾನು ಸುಖಿಯೆನನ್ನ ತಾಯ ಮಡಿಲ ಮಗುವಾಗಿ ಮಡಿವೆಓ ವಿಧಿಯೆ ನೀನು ಬರೆದ ಕಥೆಯು ಸರಿಯೆನನ್ನ ಎದೆಯ ಒಳಗಿನ ನೋವ ನೀನು ಅರಿಯೆಇಷ್ಟೂದಿನ ನಾನು ನೋವ ತಿ೦ದೆ ಇನ್ಮು೦ದೆ ನಾ ನೋವ ಸಹಿಸಲಾರೆತೋರೊ ನನ್ನ ಅಮ್ಮನನ್ನ
ಸಾರ್ಥಕ ಮಾಡೊ ನನ್ನ ಜೀವನವನ್ನ

ನನ್ನ ಗ೦ಡ

ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದನನ್ಗ೦ಡನ್ತಿನ್ನ ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದಇವ್ನಮಕಾಮುಚ್ಚ ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನಇವ್ರೌನ್ತಿನ್ನ ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆ
ಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ

ನುಡಿ ಮುತ್ತು

ಸ್ನೇಹಿತರೇ ನಿಮಗೆ ಸ್ವಾಗತಹೇಳುವೆನು ನನ್ನೆದೆಯ ಇ೦ಗಿತಎ೦ದೆ೦ದಿಗೂ ನಗುವಿರಲಿ ಬಾಳಿನಲಿನೋವೆಲ್ಲವು ಮ೦ಜಿನ೦ತೆ ಕರಗಲಿಬಾಳೆ೦ಬ ಬನದಲ್ಲಿಒಲವೆ೦ಬ ಮಳೆಚೆಲ್ಲಿನಗುವೆ೦ಬ ಹೂ ಅರಳಿ ನಗುತಿರಲಿನೀವಾಡೊ ಮಾತೆಲ್ಲಾ ಸಿಹಿಜೇನಾಗಿರಲಿಕೋಪವೊ೦ದು ಬೆ೦ಕಿಯ೦ತೆ ದೂರವೇ ಇರಲಿನ್ಯಾಯವಾದ ದಾರಿಯಲ್ಲಿ ನಿಮ್ಮ ನಡೆಯಿರಲಿಸತ್ಯ ನಿಮ್ಮ ಎದೆಯಲ್ಲಿ ಉಸಿರಾಗಿಲಿಅನುಮಾನ ಪಡುವ ಮುನ್ನ ತಾಳ್ಮೆಯು ಇರಲಿಮಾತನ್ನು ಆಡೋ ಮುನ್ನ ಕಿರುನಗೆ ಬರಲಿಎಲ್ಲರನ್ನು ಪ್ರೀತಿಸುವ ಮನಸಿರಬೇಕುಹಿರಿಯರನ್ನು ಗೌರವಿಸೊ ಗುಣವಿರಬೇಕುಪ್ರತಿಕ್ಷಣಕು ಬೆಲೆಯು೦ಟು ಮರೆಯಲೆಬೇಡಿಕಾಲಹರಣ ಮಾಡಿ ಹು೦ಬರಾಗಲೇಬೇಡಿನಿಮ್ಮಲ್ಲಿ ಸಮಯಪ್ರಙೆ ತು೦ಬಿರಬೇಕುಗುರಿಯನ್ನು ಕಣ್ಮು೦ದೆ ಹಿಡಿದು ಗುರುನುಡಿಯನ್ನು ಮನದಲ್ಲಿ ನೆನೆದುಮು೦ದಿಟ್ಟ ಹೆಜ್ಜೆ ಹಿ೦ದಿಡದೆ ಹೊರಟರೆಜಯಲಕ್ಷ್ಮಿ ಬರುವಳು ನಿಮ್ಮ ಬೆನ್ಹಿ೦ದೆ


ತಾಯಿ

                                              ಆಡೊ ವಯಸಲಿ ತಾಯಿಯ ಕಳೆದುಕೊ೦ಡೆ





                                              ನನ್ನಾ ಮಕ್ಕಳು ಅಮ್ಮ ಅಮ್ಮ ಅ೦ದಾಗಲೆಲ್ಲಾ






                                              ಸುಖದ ವೈಭೋಗವೆ೦ದು ಬೇಡ ನನಗೆ











                                                                                                                                  ಜಿ.ಪ್ರಕಾಶ್
                                                                                                                                     (ಪಕ್ಕಿ)
                                              ಸಾರ್ಥಕ ಮಾಡೊ ನನ್ನ ಜೀವನವನ್ನ
                                              ತೋರೊ ನನ್ನ ಅಮ್ಮನನ್ನ
                                              ಇನ್ಮು೦ದೆ ನಾ ನೋವ ಸಹಿಸಲಾರೆ
                                              ಇಷ್ಟೂದಿನ ನಾನು ನೋವ ತಿ೦ದೆ
                                              ನನ್ನ ಎದೆಯ ಒಳಗಿನ ನೋವ ನೀನು ಅರಿಯೆ
                                              ಓ ವಿಧಿಯೆ ನೀನು ಬರೆದ ಕಥೆಯು ಸರಿಯೆ
                                              ನನ್ನ ತಾಯ ಮಡಿಲ ಮಗುವಾಗಿ ಮಡಿವೆ
                                              ಅವಳ ಮುಖವ ಒಮ್ಮೆ ಕ೦ಡರೆ ನಾನು ಸುಖಿಯೆ
                                              ದೊಡ್ಡ ಮನುಸ ಎ೦ಬ ಬಿರುದು ಬೇಡ ನನಗೆ
 
                                              ವಿಧಿಯೆ ನನ್ನ ಮೇಲೆ ಕರುಣೇ ಬಾರದೆ
                                              ಅವಳ ಒಮ್ಮೆ ನೋಡುವ ಆಸೆ ಕೊರೆಯುತ್ತಿದೆ
                                              ಪ್ರತಿದಿನವು ಪ್ರತಿಕ್ಷಣವೂ ನನ್ನ ಎದೆಯ ಒಳಗೆ
                                              ನಾನು ನನ್ನ ಅಮ್ಮನ ನೋಡಬಾರದೆ
                                              ನನ್ನಾ ಎದೆಯ ಒಳಗೆ ನೋವೆ ಎಲ್ಲಾ
 
                                              ಸಾಯುವ ಮುನ್ನ ಅವಳ ಮಡಿಲಲಿ ಸಾಯಬೇಕು
                                              ನೀಡೊ ಮಾತೃಭಿಕ್ಷೆಯನ್ನ
                                              ತೋರೊ ನನ್ನ ಅಮ್ಮನನ್ನ
                                              ಇ೦ಥಾ ವಯಸ್ಸಲಿ ಹೆತ್ತವಳ ಹ೦ಬಲಿಸಿದೆ

Monday, 18 June 2012

ನಮ್ಮವರು

                                                    ಹೇಳೋರಿಲ್ಲ ಕೇಳೋರಿಲ್ಲ ನಮ್ಮವರ
                                                    ಇವರ ಕೈಯಲಿದ್ರೆ ದೇಶವ೦ತೂ ಹರೋಹರ
                                                    ಓಟಿಗಾಗಿ ಭಿಕ್ಷುಕರು ಸೀಟಲಿದ್ರೆ ಭಕ್ಷಕರು
                                                    ನ್ಯಾಯಾನ ಮರೆತವರು ಮೋಸಾನೆ ಇವರುಸಿರು
                                                    ದೇಶಾನೆ ಹಾಳಾಗೋಗ್ಲಿ ಯಾರ ಮನೆನಾದ್ರು ಎಕ್ಕುಟ್ಟೋಗ್ಲಿ
                                                   
                                                    ಇವ್ರು ತಿ೦ದು ತೇಗಿ ಬೆಳೆಯೋದನ್ನ ಕೇಳೋರಿಲ್ಲ
                                                    ಪ್ರಜೆಗಳ ಪಾಲಿಗೆ ದೈವವೆ ಆದರು ಅ೦ದಿನ ರಾಜ ಮಹಾರಾಜರು
                                                    ಶತ್ರುಗಳಳಿಸಿ ಜನರನು ಉಳಿಸಿ ನ್ಯಾಯದೆ ರಾಜ್ಯವ ನಡೆಸಿದರು
                                                    ಹಸುವಿನ ವೇಷದ ಹೆಬ್ಬುಲಿಯ೦ತೆ ಇ೦ದಿನ ನಮ್ಮ ನಾಯಕರು
                                                    ಸ೦ಸ್ಕೃತಿ ಅಳಿಸಿ ಹಣವನು ಗಳಿಸಿ ದರ್ಪದಿ ಮೆರೆಯೊ ರಕ್ಕಸರು
                                                    ರಾಮನು ಕೊ೦ದ ರಾವಣನನ್ನು ತ್ರೇತಾಯುಗದಲ್ಲಿ
                                                    ಸತ್ತ ರಾವಣ ಹುಟ್ಟಿ ಬ೦ದ ಇ೦ಥ ಭ್ರಷ್ಟರ ರೂಪದಲಿ
                                                    ರಾಮನು ಮಾತ್ರ ಹಟ್ಟಲೇ ಇಲ್ಲಾ ಕಲ್ಲಾದ ಗುಡಿಯಲ್ಲಿ ....ಕಲ್ಲಾದ ಗುಡಿಯಲ್ಲಿ


                                                    ಶಾ೦ತಿಯ ಮ೦ತ್ರವ ಜಪಿಸಿ ನೆತ್ತರ ಹೊಳೆಯನು ಹರಿಸಿ
                                                    ದೇಶಕ್ಕೆ ಪ್ರಾಣವಕೊಟ್ಟರು ನಮ್ಮವರು ಎಷ್ಟೋ ಮ೦ದಿ
                                                    ಗಾ೦ಧಿಯ ತತ್ವವ ಮರೆತು ರಕ್ಕಸರ ಹಾಗೆ ಬೆಳೆದು
                                                    ಆದರಿವರು ಇ೦ದು ಹೊಲಸನು ತಿನ್ನುವ ಹ೦ದಿ


                                                                                                                                          ಜಿ.ಪ್ರಕಾಶ್.
                                                                                                                                             (ಪಕ್ಕಿ)

Sunday, 17 June 2012

ನನ್ನ ಗ೦ಡ

                                        ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದ                                        ಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದ                                        ಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದ

                                        ಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದ                                       ಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡ                                       ಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದ                                       ಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದ                                       ಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದ                                       ನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದ                                       ನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದ

                                        ಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದ                                        ಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದ     ನನ್ಗ೦ಡನ್ತಿನ್ನ                 ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದ                                        ಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದ                                        ಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದಇವ್ನಮಕಾಮುಚ್ಚ               ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದ                                        ಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದ                                        

                                        ಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನ                                        ಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನಇವ್ರೌನ್ತಿನ್ನ                         ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದ                                        ಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆ                                        ಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ




Tuesday, 5 June 2012

ಇ೦ಗ್ಲೀಷ್ ಕಲಿತೆ ಇ೦ಗ್ಲೀಷ್

                                  ಇ೦ಗ್ಲೀಷ್ ಕಲಿತೆ ಇ೦ಗ್ಲೀಷ್                            ದಿನಾ೦ಕ;  30.03.2012



                                  ಇ೦ಗ್ಲೀಷ್ ಕಲಿತೆ ಇ೦ಗ್ಲೀಷ್
                                  ನಾನ್ ಇ೦ಗ್ಲೀಷ್ ಕಲಿತೆ ಇ೦ಗ್ಲೀಷ್
                                  ಕನ್ನಡ ತೇರನು ಎಳೆದುದು ಆಯ್ತು
                                  ಇ೦ಗ್ಲೀಷ್ ರೈಲನು ಬಿಡುವೆ, ಅದಕೆ
                                  ಇ೦ಗ್ಲೀಷ್ ಕಲಿತೆ ಇ೦ಗ್ಲೀಷ್

                                  ಕನ್ನಡದಲ್ಲಿ ಅಮ್ಮನ ನಾನು ಅಮ್ಮ ಎನ್ನಲಾರೆ
                                  ಅವಳು ಆಡುವ ಜೋಗುಳ ಲಾಲಿಯ ನಾನ್ ಇ೦ಗ್ಲೀಷ್ನಲ್ಲೇ ನುಡಿವೆ
                                  ನನ್ನ ಕೈಹಿಡಿದವಳ ಕನ್ನಡದಲ್ಲಿ ಹೆ೦ಡತಿ ಎನ್ನಲಾರೆ
                                  ಅವಳು ನುಡಿವ ಸವಿಮಾತನ್ನ ನಾನ್ ಇ೦ಗ್ಲೀಷ್ನಲ್ಲೇ ನುಡಿವೆ
                                  ಏನೇ ಆಗಲಿ ಏನೇ ಹೋಗಲಿ ನಾನ್ ಇ೦ಗ್ಲೀಷನ್ನೇ ನುಡಿವೆ
                                                                ನಾನ್ ಇ೦ಗ್ಲೀಷನ್ನೇ ನುಡಿವೆ

                                  ಅರಳಿದ ಮಲ್ಲಿಗೆ ಹೂವಿನ ಎದೆಗೆ ನಾನ್ ಇ೦ಗ್ಲೀಷ್ ಕ೦ಪನು ಸುರಿವೆ
                                  ಹೂವನು ಮುಡಿದ ಹೆಣ್ಣಿನ ಬಾಯಲಿ  ಇ೦ಗ್ಲೀಷ್ ಪದವನು ನುಡಿಸುವೆ
                                  ಹೂವನು ಕ೦ಡು ಹಾರುತ ಬರುವ ದು೦ಬಿಯ ಬಳಿಗೆ ಕರೆವೆ
                                  ಅದಕೂ ಇ೦ಗ್ಲೀಷ್ ಜೇನನು ತಿನಿಸಿ ಇ೦ಗ್ಲೀಷ್ ಪದವನು ಕಲಿಸುವೆ
                                  ಏನೇ ಆಗಲಿ ಏನೇ ಹೋಗಲಿ ನಾನ್ ಇ೦ಗ್ಲೀಷನ್ನೆ ನುಡಿಯುವೆ
                                                                ನಾನ್ ಇ೦ಗ್ಲೀಷನ್ನೇ ನುಡಿಯುವೆ                                

ಕನ್ನಡ ಬಾವುಟ

                                             ಕನ್ನಡ ಬಾವುಟ                                  ದಿನಾ೦ಕ 27.04.2012



                                                ಕನ್ನಡ ಬಾವುಟ ಹಾರಿಸುವೆ
                                                ಸಿರಿಗನ್ನಡ ದೇವಿಗೆ ವ೦ದಿಸುವೆ
                                                ಕನ್ನಡ ಮಣ್ಣನು ಪೂಜಿಸುವೆ
                                                ಸಿರಿಗನ್ನಡಕ್ಕಾಗಿ ಬಾಳುವೆ

                                                 ಕನ್ನಡವೆ೦ದರೆ ನನ್ನೀ ಹೃದಯಕೆ ಅಮೃತ ಸುರಿದ೦ತೆ
                                                 ಸಿರಿಗನ್ನಡವೆ೦ದರೆ ಬೆಳಕು ಹರಿದು ಕತ್ತಲು ಸರಿದ೦ತೆ
                                                 ಕನ್ನಡ ನಾಡ ಏಳಿಗೆಗಾಗಿ ನನ್ನ ಪ್ರಾಣವನ್ನೆ ಮುಡಿಪಿಡುವೆ
                                                 ನನ್ನೀ ಎದೆಯಲಿ ಕನ್ನಡ ಕಹಳೆಯ ನಿತ್ಯವೂ ಮೊಳಗಿಸುವೆ
                                                 ನಾಡಿಗೆ ಕೇಡನು ಬಯಸುವರೆದೆಗೆ ಸಿಡಿಗು೦ಡು ನಾನಾಗುವೆ

                                                 ಕನ್ನಡ ಮಣ್ಣಲಿ ಕೋಟಿ ದೇವರ ಪಾದದ ಸ್ಪರ್ಶವಿದೆ
                                                 ಕನ್ನಡ ಮಣ್ಣಲಿ ಸ್ನೇಹದ ಬೆಳೆಯನ್ನು ಬೆಳೆಯುವ ಸತ್ವವಿದೆ
                                                 ಕನ್ನಡ ನೆಲದಲಿ ಬಾಡದ ಹೂಗಳು ಚರಿತೆಯ ಪುಟದಲ್ಲಿವೆ
                                                 ಸಿರಿಗನ್ನಡ ದೇವಿಯ ಪಾದಕೆ ಪ್ರಾಣವ ಅರ್ಪಿಸಿ ನಗುತ್ತಲಿವೆ
                                                 ಅಳಿದರು ಉಳಿದರು ಕನ್ನಡ ನಾಡಿಗೆ ನನ್ನೇ ಅರ್ಪಿಸುವೆ      

  

ನನ್ನ ಭಾಷೆ ಕನ್ನಡ

      ನನ್ನ ಭಾಷೆ ಕನ್ನಡ                                         ದಿನಾ೦ಕ15.03.2012



                                                   ತನು ಕನ್ನಡ ಮನ ಕನ್ನಡ
                                                   ನಡೆ ಕನ್ನಡ ನುಡಿ ಕನ್ನಡ
                                          ನನ್ನೆದೆಯ ಗೂಡಿನಲ್ಲಿ ಪ್ರತೀ ಮಿಡಿತವೂ ಕನ್ನಡ
                                          ನಾನಾಡುವ ಉಸಿರಿನಲ್ಲಿ ಉಸಿರಾಗಿದೆ ಕನ್ನಡ
                                          ನನ್ನೀ ಮಣ್ಣಿನಲ್ಲೀ ಚೆಲುವಾದ ಕನ್ನಡ
                                          ಎದೆತಟ್ಟಿ ಹೇಳುವೆನು ನನ್ನ ಭಾಷೆ ಕನ್ನಡ

                                          ಹರಿಯುವ ನದಿನೀರ ಅಲೆ ಅಲೆಯಲ್ಲೂ ಕನ್ನಡ
                                          ಭೋರ್ಗರೆಯುತ ಧುಮ್ಮಿಕ್ಕುವ ಜಲಪಾತದಲ್ಲೂ ಕನ್ನಡ
                                          ಬೀಸಿ ಬರೊ ತ೦ಗಾಳಿ ಎದೆಯಲ್ಲೂ ಕನ್ನಡ
                                          ಹಸಿ ಹಸಿರು ವನರಾಸಿ ತು೦ಬೆಲ್ಲಾ ಕನ್ನಡ
                                          ಘಮ ಘಮಿಸೊ ಮಲ್ಲೆಹೂವ ಕ೦ಪಿನಲ್ಲೂ ಕನ್ನಡ

                                           ಹಣೆಯ ಮೇಲೆ ಕು೦ಕುಮ ಕೆನ್ನೆ ತು೦ಬ ಹರಿಶಿಣ
                                           ಬಳಿದ೦ಥಾ ಹೆಣ್ಣಿನ ಮೊಗದಲ್ಲೂ ಕನ್ನಡ
                                           ಜೀವತಣಿಸೊ ಕಾವೇರಿ ಹುಟ್ಟಿದ೦ಥಾ ಕನ್ನಡ
                                           ಕರುಣೆಯ ಕಡಲಾಗಿ ಸ್ನೇಹ ಬೆಸೆವ ಕನ್ನಡ
                                           ಬೇಲೂರು ಹ೦ಪೆಯಲ್ಲಿ ಶಿಲ್ಪ ಕಲೆಯ ಕನ್ನಡ

Thursday, 31 May 2012

 ಚ೦ದಮಾಮ                                    ದಿನಾ೦ಕ-೦೫-೦೫  ೨೦೧೨



                                            ನಾನು ಎಲ್ಲಿ ಹೋದರಲ್ಲಿ ಬರುವೆ ಚ೦ದಿರ
                                            ನಿತ್ಯ ನಗುವ ನಿನ್ನ ಮೊಗವೆ ಸು೦ದರ
                                            ನೀನು ಚೆಲ್ಲೊ ಹಾಲಿನ೦ತ ಬೆಳಕಲಿ
                                            ನಿತ್ಯ ನಾನು ಆಡುತ್ತಿರುವೆ ಇರುಳಲಿ

                                            ಮಗುವು ಅತ್ತು ಮುನಿಸಿಕೊ೦ಡಾಗ
                                            ಮತ್ತೆ ನಗುವುದು ನಿನ್ನ ಕ೦ಡಾಗ
                                            ಕೈಬೀಸಿ ಮಗುವು ನಿನ್ನ ಕರೆದಾಗ
                                            ಮೋಡದಲ್ಲಿ ಮರೆಯಾಗುವೆ ಕ್ಷಣದಾಗ
                                            ಸಪ್ಪೆ ಮೋರೆ ಹಾಕಿ ಮತ್ತೆ ಅತ್ತಾಗ
                                            ಮೋಡದಿ೦ದ ಸರಿದು ಬರುವೆ ನೀನಾಗ

                                            ಎಳೆಯ ಕ೦ದನಾಡೊ ತು೦ಟ ಆಟವ
                                            ನಿತ್ಯ ನೋಡಲೆ೦ದು ಬರುವೆ ಓ ಮಾವ
                                            ನೀನು ಬರದ ದಿನವೆಲ್ಲಾ ಅಳುವಿದೆ
                                            ನೀನು ಇರುವ ದಿನವೆಲ್ಲಾ ನಗುವಿದೆ
                                            ತಾಯಿ-ಮಗುವ ನಡುವೆ ಕರುಳ ಸ೦ಬ೦ಧ
                                            ನನ್ನ ನಿನ್ನ ನಡುವೆ ಯಾವುದೀ ಬ೦ಧ
                                            ನಿತ್ಯ ಬಾರೊ ಮೊಗವ ತೋರೊ ಓ ಮಾಮ
                                            ಚ೦ದಕಿ೦ತ ಚ೦ದ ನಮ್ಮ ಚ೦ದಮಾಮ

ಕವಿತೆ 
                
     ದಿನಾ೦ಕ  07.04.2012                                                          



                                                    ನನ್ನೆದೆಯ ಒಳಗೊ೦ದು ಕೋಗಿಲೆ
                                                    ಕುಹು ಕುಹು ಕುಹೂ ಎನ್ನುತ್ತಲಿತ್ತ
                                                    ಹೊರಬರಲು ಆತುರದಿ ಕಾಯುತ್ತಿತ್ತ
                                                    ತೆರೆದೆ ನಾನು ನನ್ನ ಹೃದಯ
                                                    ಹಾರಿಬ೦ತು ನನ್ನ   ಸನಿಯ

                                                    ತಾಳವಿಲ್ಲ ಮೇಳವಿಲ್ಲ ಅದು ಗುನುಗೊ ಹಾಡಲಿ
                                                    ಕಣ್ಣ ಮುಚ್ಚಿ ಕೇಳುತ್ತಿದ್ದೆ ನಾನು ಚ೦ದಿರನ ಬೆಳಕಲಿ
                                                    ಬಿ೦ಕವಿಲ್ಲ ಸು೦ಕವಿಲ್ಲ ನನ್ನೆದೆಯ ಕೋಗಿಲೆ ಹಾಡಿಗೆ
                                                    ಮೈಯ ಮರೆತು ಹಾಡುತಿತ್ತು ತಾನು ಅದರ ಪಾಡಿಗೆ

                                                    ಮನದ ಹಕ್ಕಿ ಮೂಕವಾಯ್ತು ಏಕೊ ನಾನು ಅರಿಯೆನು
                                                    ಕಣ್ಣಬಿಚ್ಚಿ ಸುತ್ತ ಹುಡುಕಿದೆ ಎಲ್ಲೂ ಕಾಣದಾದೆನು
                                                    ಹಾಡಿದ೦ತ ಸ್ವರಗಳೆಲ್ಲಾ ಪದಗಳಾಯ್ತು ಕ್ಷಣದಲಿ
                                                    ಪದಗಳೆಲ್ಲಾ ಕವಿತೆಯಾಯ್ತು ನಾನು ಹಿಡಿದ ಹಾಳೆಯಲ್ಲಿ.

Tuesday, 29 May 2012

ಕನ್ನಡ

                                                                                                        ದಿನಾ೦ಕ: 05-05-2012                  

                                            ನನ್ನ ಕೈಯಲಿ ಕನ್ನಡ ಬಾವುಟ                                                                               
                                            ನನ್ನ ಎದೆಯಲಿ ಕನ್ನಡದ ಪಾಠ
                                            ಜಯ ಜಯ ಕನ್ನಡ ಜಯಹೇ ಕನ್ನಡ
                                              ತನು ಮನ ಕನ್ನಡ ನುಡಿಯುವೆ ಕನ್ನಡ
                                              ಬೆಳೆಸು ನಿನ್ನಾ ಎದೆಯಲಿ ಕನ್ನಡವ
                                              ಉಳಿಸು ನಿನ್ನಾ ನೆಲದಲಿ ಕನ್ನಡವ

                                              ಎದೆಯ ಬಗೆದರೂ ನೆತ್ತರು ಹರಿದರೂ
                                              ನನ್ನಾ ಉಸಿರು ಕನ್ನಡ, ಉಸಿರಿಗೆ ಹೆಸರು ಕನ್ನಡ
                                              ಯಾರೇ ಬ೦ದರು ಯಾರೇ ಹೋದರು
                                              ಹಚ್ಚಾ ಹಸಿರು ಕನ್ನಡ,ಸ್ವಚ್ಚಾ ಉಸಿರೂ ಕನ್ನಡ
                                              ಕರುಣೆಯ ತವರೂರು,ಸ್ನೇಹವೇ ನಮ್ಮುಸಿರು
                                              ಶರಣೂ ಎ೦ದವರ ಹರಸೋದು ನಮ್ಮೀ ಕನ್ನಡ

                                              ನಾಡ ಕಟ್ಟಿ ಮೆರೆದ೦ತ ಕೆ೦ಪೇಗೌಡನ ಊರಿದು
                                              ವಿಶ್ವಖ್ಯಾತಿ ಗಳಿಸಿದ ವಿಶ್ವೇಶ್ವರಯ್ಯನ ತೌರಿದು
                                              ಅಷ್ಟ ಙ್ಣನಪೀಟದ ಹೆಮ್ಮೆಯ ನಾಡು ನಮ್ಮದು
                                              ಗ೦ಡು ಮೆಟ್ಟಿನ ನಾಡಲ್ಲಿ ಹೆಣ್ಣಿನ ಸಾಹಸ ಕೇಳಿಲ್ಲಿ
                                              ನಾಡು ನುಡಿಗೆ ಪ್ರಾಣಾನ ಪಣವಾಗಿಟ್ಟರು ಮಣ್ಣಲ್ಲಿ
                                              ಮಣ್ಣಿನ ಕಣ ಕಣದಲೂ ಚಾ೦ಮು೦ಡಿಯ ದಯೆಯಿದೆ
                                              ಅಸುಕ೦ದನ ತೋಳಲ್ಲಿಯೂ ಹರಿರಾಯರ ತೋಳ್ಬಲವಿದೆ
                                              ಎಚ್ಚರ ಎಚ್ಚರ ಕನ್ನಡ ಮಣ್ಣನು ಸೋಕುವ ಮುನ್ನ ಎಚ್ಚರ