Friday, 20 July 2012

ನಾನು


                                                                                              ದಿನಾ೦ಕ 05.05.2012


                             ಆತ್ಮನು ನಾನಲ್ಲ ಒಳಗಿನ ಪರಮಾತ್ಮನು ನಾನಲ್ಲ
                             ದೇಹವು ನನಗಿಲ್ಲ ಮನುಜನ ಒಳಗಡೆ ನಾನಿಹೆನಲ್ಲ
                             ಎದೆಯ ಒಳಗೆ ಅಹ೦ಕಾರವೆ ನಾನು
                             ಮನುಜನ ಕೆಡಿಸೊ ಅಧಿಕಾರಿಯು ನಾನು
                             ನಾನು ಇಲ್ಲದೆ ಏನಿಲ್ಲ ನಾನು ಇದ್ರೆ ಬಾಳಿಲ್ಲ

                             ಅರಳುವ ಹೂವು ನಾನಲ್ಲ ಹೂವಿನ ಪರಿಮಳ ನನಗಿಲ್ಲ
                             ಬಿಸಿಲಿನ ಹಾಗೆ ನಾ ಬರುವೆ ಹೂವನೆ ಸುಟ್ಟು ಬಿಡುವೆ
                             ಸಿಹಿಯ ಹಣ್ಣು ನಾನಲ್ಲ ಹಣ್ಣಿನ ರುಚಿಯು ನನಗಿಲ್ಲ
                             ಹುಳುವಿನ ಹಾಗೆ ನಾ ಬರುವೆ ಹಣ್ಣನೆ ಕೊರೆದು ಬಿಡುವೆ
                             ನಾನಿರುವ ಜಾಗ ಮಡಿಲಿನ ಬೆ೦ಕಿ
                             ನಾನಿರದ ಜಾಗ ಜೇನಿನ ಬುಟ್ಟಿ

                             ನನ್ನ ಕರೆವ ಮನುಜನಿಗೆ ಬೇರೆ ವೇಷ ತೊಡಿಸುವೆನು
                             ನನ್ನ ಸೂತ್ರಕೆ ಅವನ ಗಾಳಿಪಟವ ಮಾಡುವೆನು
                             ಅವನು ತಿನ್ನೋ ಅನ್ನವನು ಕಾಲಿನಿ೦ದ ಒದೆಸುವೆನು
                             ಮಕ್ಕಳನ್ನು ಕ೦ಡಾಗ ಕಡು ಕೋಪವನ್ನೆ ನೀಡುವೆನು
                             ಮನೆಯ ಹೊಡೆವೆ ಅವನ ಮನವ ಮುರಿವೆ
                             ಅವನ ಸುಖವ ನು೦ಗಿ ನಾನು ನಗುವೆ 

Sunday, 1 July 2012

ಜೀವನ

ಜೀವನವೆ೦ಬ ಸಾಗರದಲ್ಲಿ ಪಯಣ ನಮ್ಮದು
ಈಸಬೇಕು ಇದ್ದು ಜೈಸಬೇಕು
ಸೋಲೇ ಗೆಲುವಿನ ಒಳಗಿನ ಗುಟ್ಟು
ಸೋಲು ಗೆಲುವು ಎರಡೂ ಉ೦ಟು
ಸೋಲುವವನಿಗೆ೦ದು ಬಾಳೇ ಇಲ್ಲ
ಸಾಧಸಿದವನಿಗೆ೦ದು ಸೋಲೇ ಇಲ್ಲ
ಸಾಧಿಸು ನೀನು ದೇವರ ನ೦ಬಿ ಕೈ ಬಿಡದ೦ತೆ
ಸೋಲೊ ಗೆಲುವೊ ಅನ್ನೋ ಚಿ೦ತೆ ನಿನಗೆ ಏತಕೆ
ಸಮಯದ ಮುಳ್ಳು ನಿಲ್ಲುವ ಮುನ್ನ ಮಾಡು ಸಾಧನೆ
ಹುಟ್ಟಿದ ಮನುಜ ಸಾಯಲೇಬೇಕು ಸಮಯ ಮು೦ದಿದೆ
ಬಾಳಲಿ ಸಿಡಿಲು ಬಡಿದರೆ ಎದೆಯಲಿ ಧೈರ್ಯ ಬೇಕಿದೆ
ಬಾನಲಿ ಸಿಡಿಲು ಬಡಿದರೆ ಎದೆಯಲಿ ದಿಗಿಲು ಏತಕೆ
ನಾವು ನಗಲು ತಟ್ಟಲೆಬೇಕು ಶ್ರಮದ ಬಾಗಿಲು
ಹೂವು ಘಮ್ಮನೆ ಅರಳಿ ನಗಲು ಮುಳ್ಳೇ ಕಾವಲು
ಇರುಳಿಗೆ ಹೆದರಿ ಚ೦ದ್ರ ಓಡಿಹೋದನೆ
ಮೋಡಕೆ ಹೆದರಿ ಸೂರ್ಯ ಮರೆಯಾಗುವನೆ
ಅಮ್ಮನ ನೋಡಿ ಮಗುವು ಅತ್ತರೆ ಹಾಲು ನೀಡೋಲ್ಲವ
ಧರೆಯ ನೋಡಿ ಮುಗಿಲು ಅತ್ತರೆ ಬೆಳೆಯು ಅಲ್ಲವೆ
ತುಳಿಯುತ ನಡೆದಾಗ ಗೆಲುವೆ ಬೆ೦ಗಾವಲು
ಗುರಿಯನ್ನ ತಲುಪೋಕೆ ಸೋಲೆ ಮೆಟ್ಟಿಲು
ಧೈರ್ಯದೆ ನಾವು ಈಜಲು ಗೆಲುವು ನಮ್ಮದು
ಬಿರುಗಾಳಿಗೆ ಹೆದರಿ ಹಿ೦ದಕೆ ಹೋಗಬಾರದು

Monday, 25 June 2012

ನನ್ನ ಗ೦ಡ

                                            ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದ                                            ಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದ                                            ಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದ
                                            ಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದ                                            ಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡ                                            ಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದ                                            ಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದ                                            ಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದ                                            ನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದ                                            ನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದ
                                            ಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದ                                            ಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದ      ನನ್ಗ೦ಡನ್ತಿನ್ನ                    ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದ                                             ಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದ                                             ಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದ      ಇವ್ನಮಕಾಮುಚ್ಚ              ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದ                                             ಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದ
                                             ಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನ                                             ಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನ       ಇವ್ರೌನ್ತಿನ್ನ                      ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದ                                             ಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆ
ಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ
 
                                           
 

Tuesday, 19 June 2012

ನನ್ನ ದೇಶ ಭಾರತ


ನನ್ನ ದೇಶ ಭಾರತನನ್ನ ತಾಯಿ ಭಾರತಿಎಲ್ಲಿದ್ದರು ಎ೦ತಿದ್ದರು ನಾನು ಭಾರತೀಯನುಬಡತನದಿ ಸಿರಿತನದಿ ನನ್ನ ದೇಶ ಮರೆಯನುಪರಕೀಯರ ಮುಷ್ಟಿಯಲ್ಲಿ ಬಾಳುತ್ತಿದ್ದೆವಾದಿನನನ್ನ ಮನೆಯ ಅ೦ಗಳದಿ ಆಡುತಿರುವೆ ಈದಿನಗಾ೦ಧಿ ನೆಹರು ಶಾಸ್ತ್ರಿಯ೦ತ ಮಕ್ಕಳನ್ನು ಹಡೆದಳುದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ಮರೆಯಳುಭುಜದ ಮೇಲೆ ಧ್ವಜವ ಇರಿಸಿ ವಿಶ್ವದಲ್ಲೇ ಮೆರೆಸುವೆನನ್ನ ತಾಯ ನಗುವಿಗಾಗಿ ಪ್ರಾಣವನ್ನೇ ನೀಡುವೆಮರುಜನ್ಮ ಇರುವುದಾದರೆ ನಾನು ನನ್ನ ದೇಶದಲ್ಲೆನನ್ನ ಶ್ರಮದ ಪಲವೆಲ್ಲಾ ಈ ತಾಯ ಮಡಿಲಿನಲ್ಲೇ

ಭಾರತ ದೇಶ

ನನ್ನ ದೇಶ ಭಾರತನನ್ನ ತಾಯಿ ಭಾರತಿಎಲ್ಲಿದ್ದರು ಎ೦ತಿದ್ದರು ನಾನು ಭಾರತೀಯನುಬಡತನದಿ ಸಿರಿತನದಿ ನನ್ನ ದೇಶ ಮರೆಯನುಪರಕೀಯರ ಮುಷ್ಟಿಯಲ್ಲಿ ಬಾಳುತ್ತಿದ್ದೆವಾದಿನನನ್ನ ಮನೆಯ ಅ೦ಗಳದಿ ಆಡುತಿರುವೆ ಈದಿನ
ಗಾ೦ಧಿ ನೆಹರು ಶಾಸ್ತ್ರಿಯ೦ತ ಮಕ್ಕಳನ್ನು ಹಡೆದಳುದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ಮರೆಯಳುಭುಜದ ಮೇಲೆ ಧ್ವಜವ ಇರಿಸಿ ವಿಶ್ವದಲ್ಲೇ ಮೆರೆಸುವೆನನ್ನ ತಾಯ ನಗುವಿಗಾಗಿ ಪ್ರಾಣವನ್ನೇ ನೀಡುವೆಮರುಜನ್ಮ ಇರುವುದಾದರೆ ನಾನು ನನ್ನ ದೇಶದಲ್ಲೆನನ್ನ ಶ್ರಮದ ಪಲವೆಲ್ಲಾ ಈ ತಾಯ ಮಡಿಲಿನಲ್ಲೇ