ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದ ಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದ ಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದ
ಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದ ಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡ ಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದ ಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದ ಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದ ನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದ ನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದ
ಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದ ಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದ ನನ್ಗ೦ಡನ್ತಿನ್ನ ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದ ಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದ ಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದಇವ್ನಮಕಾಮುಚ್ಚ ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದ ಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದ
ಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನ ಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನಇವ್ರೌನ್ತಿನ್ನ ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದ ಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆ ಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ
No comments:
Post a Comment